July 15, 2017

ಘರ್ಜನೆ

ನಾ ಹಲ್ಲು ಕಚ್ಚಿಕೊಂಡು, ಉಸಿರು ಹಿಡಿದಿಟ್ಟು
ನಿಮ್ಮ ಬಗ್ಗೆ ತಿಳಿಯಕ್ಹೋಗಿ ಹೆದರಿದೆ
ಹಾಗಾಗಿ ಸದ್ದಿಲ್ಲದೆ ಕುಳಿತುಬಿಟ್ಟೆ.

ನನ್ನ ಗುರಿ ಮರೆತಿದೆ ಅನಿಸುತ್ತಿದೆ
ಏನೊ ಮಾಡಲು ಹೋಗಿ ಏನೋ ಆಗುತ್ತಿದೆ
ನಾನು ಏನು ಹೆದರುತಿಲ್ಲ
ಮುಂದೆ ಆಗೋದ ನಾ ಉಹಿಸಲಾರೆ.

ನೀ ನನ್ನ ಹಿಡಿದೆ, ನಾ ಎದ್ದು
ಧೂಳಿನಂತೆ ಓಡಿ ಬಂದಿದ್ದು
ನಿಮಗೆ ನನ್ನ ಧ್ವನಿ ಕೇಳಿದ್ರೆ
ಆ ಶಬ್ದವು ಕೇಳಿರುತ್ತೆ.
ಗುಡುಗಿನ್ಹಾಗೆ ನೆಲ ನಡುಗುತ್ತೆ.


ನೀ ನನ್ನ ಹಿಡಿದಿದ್ದೆ ಅದ್ರೆ, ನಾ ಎದ್ದು ನಿಂತು
ಕಾರಣ ಕೇಳದೆ ಸಿದ್ಧನಾಗಿದ್ದೇನೆ
ಹಿಂದೆ ನಾ ಎಲ್ಲ ನೋಡಿದೆ, ಈಗ ಅದನ್ನೇ ನೋಡುತ್ತೇನೆ.

ನಾ ಹುಲಿಯಂತ ಕಣ್ಣು ಕಂಡೆ
ಬೆಂಕಿಯಂತ ನಾಟ್ಯ
ಕಾರಣ ನಾ ಗೆದ್ದಿದೇನೆ
ನೀವು ನನಗೆ ಗರ್ಜನೆ ಕೇಳಿಸಿದ್ದಿರಿ.

ಸಿಂಹ ಗರ್ಜನೆ ಗಿಂತ ಹೆಚ್ಚು ಜೋರು
ನಾ ಗೆದ್ದಿದ್ದೇನೆ
ಗರ್ಜನೆ ಕೇಳಲು ನೀವು ಸಿದ್ದರಾಗಿ.

ನಾವೀಗ ಚಿಟ್ಟೆಯಂತೆ ಹಾರಾಡುತ್ತಿರುವೆ
ಜೇನುನೊಣದಂತೆ ಗೂಡ ಕಟ್ಟುತ್ತಿರುವೆ
ಪಟ್ಟೆ ಬಟ್ಟೆಯಲ್ಲಿ ಏನು ಇಲ್ಲದಂತೆ ಕಂಡರು
ಎಲ್ಲಾವನ್ನು ಪಡೆದ ನಮಗೆ ನಾವೇ ನಾಯಕರು

-ದ್ಯಾವನೂರು ಮಂಜುನಾಥ್

No comments:

Post a Comment