January 3, 2017

ಕಿರಿಕ್ ಪಾರ್ಟಿ





ಚಿತ್ರ : ಕಿರಿಕ್ ಪಾರ್ಟಿ
ಕಲಾವಿದರು : ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ, ಪ್ರವೀಣ್, ಗಿರೀಶ್, ಅಚ್ಯುತ್ ರಾವ್
ನಿರ್ದೇಶಕ :  ರಿಷಭ್ ಶೆಟ್ಟಿ

***********************************************




     ರಕ್ಷಿತ್ ಶೆಟ್ಟಿ ಅವರು ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟನಾಗಿ ಅಷ್ಟೇ ಅಲ್ಲ, ಚಿತ್ರಕಥೆಗಾರ, ನಿರ್ಮಾಪಕನಾಗಿ ಕೂಡಾ ಪಾತ್ರವಹಿಸಿರುವುದು ಗಮನಾರ್ಹ. ಹೊಸ ಪ್ರತಿಭೆಗಳಾದ ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ ಅವರಿಗೆ ಈಗಾಗಲೇ ಫ್ಯಾನ್ ಫಾಲೋವರ್ಸ್ ಹೆಚ್ಚಾಗುತ್ತಿದೆ. ಕಾಲೇಜು ದಿನದ ಕಥೆ-ವ್ಯಥೆ ಹೊಂದಿರುವ ಈ ಚಿತ್ರ ಸೂಜಿಗಲ್ಲಿನಂತೆ ಯುವಕ-ಯುವತಿಯರನ್ನು ಚಿತ್ರಮಂದಿರದತ್ತ ಸೆಳೆಯುವ ಈ ಚಿತ್ರ ಕಾಲೇಜು ವಿದ್ಯಾರ್ಥಿಗಳಂತೂ 'ಕಿರಿಕ್ ಪಾರ್ಟಿ' ಸಿಕ್ಕಾಪಟ್ಟೆ ಇಷ್ಟವಾಗ್ಬಿಟ್ಟಿದೆ.


     ನಮ್ಮ ಹಾಸನದ ಮಾಲೇನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಶೇಕಡ 80 ರಷ್ಟು ಚಿತ್ರಿಕಾರಣ ಮಾಡಿರುವ ಈ ಚಿತ್ರದಲ್ಲಿ ಎಲ್ಲಾ ಸ್ಥಳಗಳು ಫ್ರೇಸ್ ಲೋಕೆಷನ್ ಗಳಾಗಿವೆ. ಕಾಲೇಜು ದಿನಗಳ ತರಲೆ, ಹುಡುಕಾಟ, ಗಲಾಟೆ, ಪ್ರೀತಿ ಪ್ರೇಮ ಹಾಗೂ ಸ್ನೇಹ ಪರಿಕಲ್ಪನೆಗಳೊಂದಿಗೆ ಬಂದು ಹೋಗಿರುವ ಬಹಳಷ್ಟು ಸಿನಿಮಾಗಳ ಮಧ್ಯೆ 'ಕಿರಿಕ್ ಪಾರ್ಟಿ' ಕೊಂಚ ಡಿಫರೆಂಟ್ ಆಗಿ ನಿಲುತ್ತದೆ.

     ಕನ್ನಡದ ಸಿನಿಮಾ ರಂಗ ಅದರಲ್ಲೂ ಸಹ ರಕ್ಷಿತ್ ಶೆಟ್ಟಿ ಯವರ ವಿಭಿನ್ನ ಚಿತ್ರ ಎನ್ನಬಹುದು. ಸಿನಿಮಾದಲ್ಲಿ ಬರುವ ಕರ್ಣ (ರಕ್ಷಿತ್ ಶೆಟ್ಟಿ) ಇಂಜಿನಿಯಾರಿಂಗ್ ಸ್ಟೂಡೆಂಟಾಗಿದ್ದು ಪ್ರತಿಯೊಂದು ವಿಷಯದಲ್ಲಿ ಕಿರಿಕ್ ಮಾಡಿ ಕಾಲೇಜಿನ ಎಲ್ಲಾ ವಿಧ್ಯಾರ್ಥಿಗಳಿಗೆ ಒಬ್ಬ ಅಟ್ರಾಟ್ವಿವ್ ಬಾಯ್ ಯಾಗಿರುತ್ತಾನೆ. ಕಾಲೇಜು ಅಂದರೆ ಹುಡುಗಿಯರು ಇರುತ್ತಾರೆ ಆ ಹುಡುಗಿಯ ಹಿಂದೆ ಒಬ್ಬ ಹುಡುಗು ಬೀಳುತ್ತಾನೆ. ಹಾಗೆ ಇಲ್ಲಿ ಕರ್ಣ ಸಹ ಸಿನಿಮಾರ್ ಸ್ಟೂಡೆಂಟ್ ಸಾನವಿ (ರಶ್ಮಿಕಾ ಮಂದಣ್ಣ) ಸ್ಟ್ರಿಕ್ಟ್ ಪೋಲಿಸ್ ಆಫೀಸರ್ ಮಗಳು. ಅವಳನ್ನು ಒಲಿಸಿಕೊಳ್ಳಲು ಹುಡುಗರ ಒಂದಷ್ಟು ಕಸರತ್ತು. ಮುದ್ದು ಮುಖದ, ಮೃಧು ಸ್ವಭಾವದ, ಸಭ್ಯ ಹುಡುಗಿ ಸಾನ್ವಿ ಕರ್ಣನ ತುಂಟತನಕ್ಕೆ ಸೋಲುತ್ತಾಳೆ. ಆಗ ಕರ್ಣ ಸಿರಿಯಾಸ್ ಆಗಿ ಬಿಡುತ್ತಾನೆ.
     ಆದರೆ, ಕಾಲೇಜಿನಲ್ಲಿ ಅವನ ರೌಡಿಸಂ ಕಡಿಮೆಯಾಗುವುದಿಲ್ಲ. ಮಧ್ಯಂತರದ ನಂತರ ತುಂಟ ಹುಡುಗಿ ಆರ್ಯ (ಸಂಯುಕ್ತಾ ಹೆಗಡೆ) ಅವನ ಹಿಂದೆ ಬೀಳುತ್ತಾಳೆ. ಸಾನ್ವಿ ಮುಖದಲ್ಲಿ ನಗು ತರಿಸಿದ್ದ ಕರ್ಣ, ನಂತರ ಕರ್ಣನ ಮುಖದಲ್ಲಿ ನಗು ತರಿಸೋಕೆ ಪ್ರಯತ್ನಿಸುತ್ತಾಳೆ ಆರ್ಯ.
     ಸಿನಿಮಾದಲ್ಲಿ ರಕ್ಷಿತನ್ನು ನಾನಾ ಗೆಟಪ್ ಹಾಗೂ ಶೇಡ್ ಗಳಲ್ಲಿ ನೋಡಬಹುದು. ತುಂಟನಾಗಿ, ಲವರ್ ಬಾಯ್ ಆಗಿ, ರಗಡ್ ಲುಕ್ ನ ಮಾಸ್ ಹೀರೋ ಆಗಿ, ಕಷ್ಟಕ್ಕೆ ಮರುಗುವ ವ್ಯಕ್ತಿಯಾಗಿ... ಹೀಗೆ ಒಂದೇ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಪ್ರತಿ ಶೇಡ್ ನಲ್ಲೂ ರಕ್ಷಿತ್ ಮೋಡಿ ಮಾಡುತ್ತಾ ಹೋಗುತ್ತಾರೆ. ಅದರಲ್ಲೂ ಕ್ರಿಕೆಟ್ ಕಾಮೆಂಟರಿ ಫೈಟ್ ನಲ್ಲಿ ರಕ್ಷಿತ್ ಮಜಾ ಕೊಡುತ್ತಾರೆ. ನಾಯಕಿ ರಶ್ಮಿಕಾ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಮತ್ತೊಬ್ಬ ನಾಯಕಿ ಸಂಯುಕ್ತಾ ಹೆಗಡೆ ಕೂಡ ಗಮನ ಸೆಳೆಯುತ್ತಾರೆ.
ಇದರ ನಡುವೆ ನಡೆಯುವ ಕಾಲೇಜಿನ ಎಲೆಕ್ಷನ್ ಪಾಲಿಟಿಕ್ಸ್, ಪ್ರಿನ್ಸಿಪಾಲ್ ಕಿಡ್ನಾಪ್, ಉತ್ತರ ಪತ್ರಿಕೆ ಕದ್ದು ಬರೆಯುವುದು, ತಾವು ಮಾಡೋ ಕಿರಿಕ್ಗಳಿಗೆ ಇನ್ನೊಬ್ಬರನ್ನು ಸಿಕ್ಕಿಸುವುದು, ಹೀಗೆ ಒಂದಷ್ಟು ದೃಶ್ಯಗಳು ಸೇರ್ಪಡೆಯಾಗಿವೆ. ಒಟ್ಟಾರೆ ಸಿನಿಮಾದಲ್ಲಿ ಮೊದಲ ಭಾಗ ಇಂಟರ್ವಲ್ ತನಕ ಪ್ರೇಕ್ಷಕರನ್ನು ಹಿಡಿದಿಡುವ ಚಿತ್ರ ಇಂಟರ್ ವಲ್  ನಂತರ ಅನಗತ್ಯ ದೃಶ್ಯಗಳು ಹೆಚ್ಚು ಸಮಯ ತಿಂದಿವೆ. ಈ ಸಿನಿಮಾದಲ್ಲಿ ಎಂದು ಸಹ ಕುಡಿಯಾದ ಸಾನವಿಯ ಸಾವು. ನಂತರ ಅವಳ ಬಗ್ಗೆ ಸತ್ತ ನಂತರ ಅವಳ ನಡತೆಯ ಬಗ್ಗೆ ವಿದ್ಯಾರ್ಥಿಗಳು ಹಗುರವಾಗಿ ಮಾತನಾಡುವುದು, ನಾಯಕ ಸೆಕ್ಸ್ ವರ್ಕರ್ಗೆ ಸಹಾಯ ಮಾಡುವುದು, ಕೊನೆಯಲ್ಲಿ ಸಾನ್ವಿ ಅಪ್ಪ 'ಡೈರಿ ಓದಿ ಮಗಳನ್ನು ಅರ್ಥ ಮಾಡಿಕೊಂಡೆ. ನಾನು ಒಳ್ಳೆಯ ಅಪ್ಪ ಆಗಬಹುದಿತ್ತು' ಇಂತಹ ವಿಷಯಗಳಿಗೆ ಸಿನಿಮಾದಲ್ಲಿ ಹೆಚ್ಚು ಬತ್ತು ನೀಡಿದರೆ ಸಿನಿಮಾದಕ್ಕೆ ಇನ್ನು ಸಹ ತೂಕ ಬರುತ್ತಿತ್ತು.


- ದ್ಯಾವನೂರು ಮಂಜುನಾಥ್
9482827228

No comments:

Post a Comment