ಘರ್ಜನೆ

ನಾ ಹಲ್ಲು ಕಚ್ಚಿಕೊಂಡು, ಉಸಿರು ಹಿಡಿದಿಟ್ಟು
ನಿಮ್ಮ ಬಗ್ಗೆ ತಿಳಿಯಕ್ಹೋಗಿ ಹೆದರಿದೆ
ಹಾಗಾಗಿ ಸದ್ದಿಲ್ಲದೆ ಕುಳಿತುಬಿಟ್ಟೆ.

ನನ್ನ ಗುರಿ ಮರೆತಿದೆ ಅನಿಸುತ್ತಿದೆ
ಏನೊ ಮಾಡಲು ಹೋಗಿ ಏನೋ ಆಗುತ್ತಿದೆ
ನಾನು ಏನು ಹೆದರುತಿಲ್ಲ
ಮುಂದೆ ಆಗೋದ ನಾ ಉಹಿಸಲಾರೆ.

ನೀ ನನ್ನ ಹಿಡಿದೆ, ನಾ ಎದ್ದು
ಧೂಳಿನಂತೆ ಓಡಿ ಬಂದಿದ್ದು
ನಿಮಗೆ ನನ್ನ ಧ್ವನಿ ಕೇಳಿದ್ರೆ
ಆ ಶಬ್ದವು ಕೇಳಿರುತ್ತೆ.
ಗುಡುಗಿನ್ಹಾಗೆ ನೆಲ ನಡುಗುತ್ತೆ.

ಕಿರಿಕ್ ಪಾರ್ಟಿ

ಚಿತ್ರ : ಕಿರಿಕ್ ಪಾರ್ಟಿ
ಕಲಾವಿದರು : ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ, ಪ್ರವೀಣ್, ಗಿರೀಶ್, ಅಚ್ಯುತ್ ರಾವ್
ನಿರ್ದೇಶಕ :  ರಿಷಭ್ ಶೆಟ್ಟಿ

***********************************************
     ರಕ್ಷಿತ್ ಶೆಟ್ಟಿ ಅವರು ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟನಾಗಿ ಅಷ್ಟೇ ಅಲ್ಲ, ಚಿತ್ರಕಥೆಗಾರ, ನಿರ್ಮಾಪಕನಾಗಿ ಕೂಡಾ ಪಾತ್ರವಹಿಸಿರುವುದು ಗಮನಾರ್ಹ. ಹೊಸ ಪ್ರತಿಭೆಗಳಾದ ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ ಅವರಿಗೆ ಈಗಾಗಲೇ ಫ್ಯಾನ್ ಫಾಲೋವರ್ಸ್ ಹೆಚ್ಚಾಗುತ್ತಿದೆ. ಕಾಲೇಜು ದಿನದ ಕಥೆ-ವ್ಯಥೆ ಹೊಂದಿರುವ ಈ ಚಿತ್ರ ಸೂಜಿಗಲ್ಲಿನಂತೆ ಯುವಕ-ಯುವತಿಯರನ್ನು ಚಿತ್ರಮಂದಿರದತ್ತ ಸೆಳೆಯುವ ಈ ಚಿತ್ರ ಕಾಲೇಜು ವಿದ್ಯಾರ್ಥಿಗಳಂತೂ 'ಕಿರಿಕ್ ಪಾರ್ಟಿ' ಸಿಕ್ಕಾಪಟ್ಟೆ ಇಷ್ಟವಾಗ್ಬಿಟ್ಟಿದೆ.


     ನಮ್ಮ ಹಾಸನದ ಮಾಲೇನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಶೇಕಡ 80 ರಷ್ಟು ಚಿತ್ರಿಕಾರಣ ಮಾಡಿರುವ ಈ ಚಿತ್ರದಲ್ಲಿ ಎಲ್ಲಾ ಸ್ಥಳಗಳು ಫ್ರೇಸ್ ಲೋಕೆಷನ್ ಗಳಾಗಿವೆ. ಕಾಲೇಜು ದಿನಗಳ ತರಲೆ, ಹುಡುಕಾಟ, ಗಲಾಟೆ, ಪ್ರೀತಿ ಪ್ರೇಮ ಹಾಗೂ ಸ್ನೇಹ ಪರಿಕಲ್ಪನೆಗಳೊಂದಿಗೆ ಬಂದು ಹೋಗಿರುವ ಬಹಳಷ್ಟು ಸಿನಿಮಾಗಳ ಮಧ್ಯೆ 'ಕಿರಿಕ್ ಪಾರ್ಟಿ' ಕೊಂಚ ಡಿಫರೆಂಟ್ ಆಗಿ ನಿಲುತ್ತದೆ.

ಹಾಸನ ದನಗಳ ಜಾತ್ರೆ : ಒಂದು ಪರಿಚಯ

- ದ್ಯಾವನೂರು ಮಂಜುನಾಥ್

ಹಾಸನ ದನಗಳ ಜಾತ್ರೆಯಲ್ಲಿ ಛಾಯಚಿತ್ರ
ತೆಗೆಯುತ್ತಿರುವುದು
     ಹಾಸನ ದನಗಳ ಜಾತ್ರೆಗೆ ದಶಕಗಳ ಇತಿಹಾಸವಿದ್ದು ಜಾತ್ರೆಯ ವೈಭವನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು. ಸುಗ್ಗಿ ಕಾಲ ಬಂದಿತೆಂದರೆ ನಾಡಿನಾದ್ಯಂತ ಜಾತ್ರೆಗಳು ಪ್ರರಂಭವಾಗುತ್ತವೆ ಅದರಲ್ಲು ಮೈಸೂರು ಪ್ರಂತ್ಯದಲ್ಲಿ ಡಿಸೆಂಬರ್ ಚಳಿ ಪಾರಂಭವಾಗುತ್ತಿದಂತೆ ಪ್ರರಂಭವಾಗುವ ಮೈಸೂರು ಸೀಮೆಯ ಮೊದಲ ದನಗಳ ಜಾತ್ರೆ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ರಾಮನಾಥಪುರ, ನವಂಬರ್ ತಿಂಗಳಲ್ಲಿ ಷಷ್ಠಿ ದಿನ ಸುಬ್ರಹ್ಮಣ್ಯ ರಥೋತ್ಸವ ಜೊತೆಗೆ ದನಗಳ ಜಾತ್ರೆ ಪ್ರರಂಭವಾಗುತ್ತದೆ. 

     ಈ ಜಾತ್ರೆ ಮುಗಿಯುತ್ತಿದ್ದಂತೆ ಹಾಸನ ಜಾತ್ರೆ ಪ್ರರಂಭವಾಗುತ್ತದೆ. ದನಗಳ ಜಾತ್ರೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ  ಸಾವಿರಾರು ರೈತರು ಪಾಲ್ಗೊಂಡು ತಮ್ಮ ರಾಸುಗಳಿಗೆ ಅಲಂಕಾರಗಳನ್ನ ಮಾಡಿ, ಎತ್ತಿನ ಗಾಡಿಗಳನ್ನ ಶೃಂಗರಿಸಿ ಮೆರವಣಿಗೆಯಲ್ಲಿ ದನಗಳನ್ನು ಕರೆತಂದು ರಾಜ್ಯದ ಎಲ್ಲಾ ಭಾಗದ ರೈತ ಜನರು ತಮ್ಮ ದನಗಳನ್ನು ಇಲ್ಲಿ ಕಟ್ಟಿ ತಾತ್ಕಾಲಿಕ ಬಿಡಾರವನ್ನು ಹೂಡುತ್ತಾರೆ. ತಮ್ಮ ದನಗಳ ವ್ಯಾಪರವಾಗುವರೆಗೂ ಸಹ ಇಲ್ಲೇ ವಾಸಗಿರುತ್ತಾರೆ. ಹಾಗೂ ಮನೆಯಿಂದ ತಂದ ಘಟ್ಟದ ರೊಟ್ಟಿ ತಿನ್ನುತ್ತಿದ್ದರೆ... ಚಳಿಗೆ ಅದರ ರುಚಿಯನ್ನು ಹಾಸನ ದನಗಳ ಜಾತ್ರೆಯಲ್ಲಿ ಸವಿದು ನೋಡಬೇಕು.  ಘಟ್ಟದ ರೊಟ್ಟಿ ಮುಗಿದ ಮೇಲೆ ಗಂಡಸರು ಮುದ್ದೆ ತಿರುವಿ ಘಮ ಘಮಿಸುವ ಅವರೆಕಾಳು ಸಾರು ಮಾಡಿಕೊಂಡು ತೃಪ್ತಿಯಾಗಿ ತಿಂದು ಮಲಗಿದರೆ ಯಾವ ಕೊರೆಯುವ  ಚಳಿಯೂ ಸಹ ಮೈಗೆ ತಾಗುವುದಿಲ್ಲ.